G.D. Nayudu / ಜಿ.ಡಿ. ನಾಯುಡು - Mera Library
0

Please enter AND, OR, NOT to narrow your search results
 
To
 
 
 
 
G.D. Nayudu / ಜಿ.ಡಿ. ನಾಯುಡು

G.D. Nayudu / ಜಿ.ಡಿ. ನಾಯುಡು

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಜಿ. ಡಿ. ನಾಯುಡು ಅವರದು ವಿಶಿಷ್ಟವಾದ ವ್ಯಕ್ತಿತ್ವ. ಅವರು ಕೆಲವು ರೀತಿಗಳಲ್ಲಿ ಒಬ್ಬ ವಿಚಿತ್ರ ವ್ಯಕ್ತಿ ಎಂದೂ ಎನ್ನಬಹುದು. ಅವರು ನೂರಾರು ಹೊಸ ವಸ್ತುಗಳನ್ನು ಸೃಷ್ಟಿಸಿದರು, ಹಲವಾರು ಕಾರ್ಖಾನೆಗಳನ್ನು ಸ್ಥಾಪಿಸಿದರು, ಸಾವಿರಾರು ಮಂದಿ ಕಾರ್ಮಿಕರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟರು. ಇಷ್ಟು ಸಾಧ್ಯವಾದದ್ದು ಶಿಸ್ತಿನಿಂದ, ಶ್ರಮದಿಂದ, ಸ್ವತಂತ್ರ ಮನೋಭಾವದಿಂದ. ಸರಕಾರದ ಕೆಲಸಕ್ಕೆ ಆಸೆ ಪಡದೆ, ತಮ್ಮ ಪ್ರಯತ್ನಗಳಲ್ಲಿ ಸರಕಾರದ ನೆರವನ್ನು ಬಯಸದೆ ತಮ್ಮ ಬುದ್ಧಿಶಕ್ತಿ, ತಮ್ಮ ಶ್ರಮ ಇವನ್ನೇ ನೆಚ್ಚಿದರು ಅವರು. ಸ್ವತಂತ್ರ ಭಾರತದಲ್ಲಿ ಅವರು ಕಂಡ ಸ್ವಾರ್ಥ, ಸೋಮಾರಿತನ, ಎಲ್ಲಕ್ಕೂ ಸರಕಾರಕ್ಕೆ ಕೈಯೊಡ್ಡುವ ಮನೋಭಾವ, ಹಲವು ರಾಜಕೀಯ ಪಕ್ಷಗಳ ಮತ್ತು ಮುಖಂಡರ ಅಪ್ರಾಮಾಣಿಕತೆ, ಗೊಂದಲವೆಬ್ಬಿಸಿ ಜಗಳ ಸೃಷ್ಟಿಸಿ ತಮಗೆ ಅನುಕೂಲಮಾಡಿಕೊಂಡು ತಮ್ಮ ಪ್ರಭಾವ ಬೆಳೆಸುವ ಮನೋವೃತ್ತಿ ಎಲ್ಲ ಕಂಡು ಅಸಹ್ಯ ಪಟ್ಟರು. ಹತ್ತಾರು ಕಾರ್ಖಾನೆಗಳನ್ನು ನಡೆಸಿ, ಕಾರ್ಖಾನೆಗಳು ವೃತ್ತಿ ಶಾಲೆಗಳು ಮೊದಲಾದವುಗಳಿಂದ ಹೊಸದೊಂದು ಜಗತ್ತನ್ನೇ ಅವರು ಸೃಷ್ಟಿಸಿದರು. ಇದರಿಂದ ಅವರಿಗೆ ಸರಕಾರದ ನಾನಾ ಇಲಾಖೆಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಮತ್ತು ಮಂತ್ರಿಗಳ ಪರಿಚಯ, ಸಂಪರ್ಕ ಬೆಳೆಯಿತು. ಆದರೆ ಭ್ರಷ್ಟಾಚಾರ ಅಥವಾ ಬರಿಯ ಬಾಯಿ ಮಾತಿನವರನ್ನು- ಅವರು ಎಂತಹ ಪ್ರಭಾವೀ ಅಧಿಕಾರಿಗಳಾಗಲಿ, ಮಂತ್ರಿಗಳಾಗಲಿ ದೂರ ಇಟ್ಟರು. ಅವರು ಎಂದೂ ಯಾರಿಗೂ ತಲೆ ಬಾಗಲಿಲ್ಲ. ಸ್ವತಂತ್ರ ಮನೋಧರ್ಮದ ಧೀರ ಉದ್ಯೋಗ ಶೀಲತೆಯ ಮೂರ್ತಿ ಜಿ. ಡಿ. ನಾಯುಡು.