ಅಲಾಉದ್ದೀನ್ ಖಾನ್ - Mera Library
0

Please enter AND, OR, NOT to narrow your search results
 
To
 
 
 
 
ಅಲಾಉದ್ದೀನ್ ಖಾನ್

ಅಲಾಉದ್ದೀನ್ ಖಾನ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಸಾವಿರದ ಒಂಬೈನೂರ ಇಪ್ಪತ್ತನಾಲ್ಕನೆಯ ಇಸವಿ. ಸ್ಥಳ ಲಖನೌ. ಭಾರತದ ಸಂಗೀತ ವಾಚಸ್ಪತಿಯೊಬ್ಬರು ಆಗ ಲಖನೌ ಸಂಗೀತ ಸಮ್ಮೇಳನಕ್ಕೆ ಆಮಂತ್ರಿತರಾಗಿದ್ದರು. ಆದರೆ ಈ ಮಹರ್ಷಿಯಂಥ ಸಂಗೀತ ತಪಸ್ವಿಗಳು ಸಮ್ಮೇಳನದಲ್ಲಿ ಭಾಗವಹಿಸಲು ತಮ್ಮದೊಂದು ಷರತ್ತನ್ನು ಹಾಕಿದರು. ಅವರು ಪುಟ್ಟ ಬಾಲಕರನ್ನು ಕಲೆಹಾಕಿ ಅವರನ್ನು ಸಂಗೀತದ ಗರಡಿಯಲ್ಲಿ ಪಳಗಿಸಿ ಆ ಪುಟ್ಟ ಹುಡುಗರದೇ ಒಂದು ವಾದ್ಯವೃಂದವನ್ನು ಸಂಘಟಿಸಿದ್ದರು. ಈ ವಾದ್ಯವೃಂದಕ್ಕೆ ಸಮ್ಮೇಳನದ ಕಾರ್ಯಕ್ರಮದಲ್ಲಿ ಅವಕಾಶ ಕೊಟ್ಟರೆ ಮಾತ್ರ ಭಾಗವಹಿಸುವುದು ಎಂಬುದೇ ಅವರ ಷರತ್ತು. ವ್ಯವಸ್ಥಾಪಕರು ಒಪ್ಪಲಿಲ್ಲ. ಆದ್ದರಿಂದ ಈ ವಿದ್ವಾಂಸರು ‘ಬರುವುದಿಲ್ಲ’ ಎಂದುಬಿಟ್ಟರು. ಗತ್ಯಂತರವಿಲ್ಲದೆ ಆ ಪುಟ್ಟಬಾಲಕರ ವಾದ್ಯವೃಂದಕ್ಕೆ ಹತ್ತು ನಿಮಿಷ ಮಾತ್ರ ಅವಕಾಶ ನೀಡಲಾಯಿತು. 
 ಆದರೆ ಈ ಪುಟಾಣಿ ಕಲಾವಿದರು ‘ಯಮನ್’ ರಾಗದಲ್ಲಿ ತಮ್ಮ ವಾದ್ಯಗಳ ಮೇಲೆ ಆಘಾತ ಮಾಡಿದ್ದೇ ತಡ ಪಂಡಿತರಿಂದ ಕೂಡಿದ ಶ್ರೋತೃವೃಂದ ಬೆಕ್ಕಸ ಬೆರಗಾಯಿತು. ಒಂದು ರಾಗದ ನಂತರ ಮತ್ತೊಂದು ರಾಗವನ್ನು ಈ ಹತ್ತು-ಹನ್ನೆರಡರ ಪುಟ್ಟ ಕಲಾವಿದರು ಬಾರಿಸುತ್ತಾ ಸಾಗಿದರು. ಹತ್ತು ನಿಮಿಷದ ಗಡುವು ವ್ಯವಸ್ಥಾಪಕರಿಗೇ ಮರೆತುಹೋಯಿತು. ‘ಒನ್ಸ್ ಮೋರ್, ಒನ್ಸ್ ಮೋರ್’ ಎಂಬ ಹರ್ಷೋದ್ಗಾರಗಳು ಒಂದಾದ ಮೇಲೊಂದರಂತೆ ಭೋರ್ಗರೆದವು. ಮೂರು ಗಂಟೆಗಳ ಕಾಲ ಸತತವಾಗಿ ಮಕ್ಕಳ ಕಛೇರಿ ಸಾಗಿತು. 
ಈ ಪುಟಾಣಿಗಳನ್ನು ಕಲಾಪಟುಗಳನ್ನಾಗಿ ಪರಿವರ್ತಿಸಿದ್ದ ಆ ಮಹಾನ್ ವ್ಯಕ್ತಿ ಉಸ್ತಾದ್ ಅಲಾಉದ್ದೀನ್ ಖಾನ್.