Keshavachandra Sen / ಕೇಶವಚಂದ್ರ ಸೇನ್ - Mera Library
0

Please enter AND, OR, NOT to narrow your search results
 
To
 
 
 
 
Keshavachandra Sen / ಕೇಶವಚಂದ್ರ ಸೇನ್

Keshavachandra Sen / ಕೇಶವಚಂದ್ರ ಸೇನ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಕೇಶವಚಂದ್ರ ಸೇನರು ಭಾರತದಲ್ಲಿ ಹುಟ್ಟಿದರು, ಹಿಂದೂ ಧರ್ಮವನ್ನು ಅಭ್ಯಾಸ ಮಾಡಿದರು, ಭಾರತೀಯ ಸಂಸ್ಕೃತಿಯನ್ನು ತಿಳಿದುಕೊಂಡರು. ಇದರೊಂದಿಗೆ ಬೇರೆ ದೇಶಗಳ ಧರ್ಮಗಳನ್ನೂ ಸಂಸ್ಕೃತಿಗಳನ್ನೂ ಅಭ್ಯಾಸ ಮಾಡಿದರು. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಶ್ರೇಷ್ಠವಾದದ್ದನ್ನು ಭಾರತೀಯ ಸಂಸ್ಕೃತಿಯೊಂದಿಗೆ ಸಂಗಮಗೊಳಿಸುವ ಪ್ರಯತ್ನವನ್ನು ಮಾಡಿದರು. ಅವರು ಧಾರ್ಮಿಕ ಜೀವಿಗಳು. ಆದರೆ ಸಮಾಜದಿಂದ ದೂರ ನಿಲ್ಲಲಿಲ್ಲ. ಸಮಾಜದಲ್ಲಿ ತಮಗೆ ಕಂಡುಬಂದ ದೋಷಗಳನ್ನು ತಿದ್ದಲು ಕ್ರಿಯಾಶಾಲಿಗಳಾಗಿ ಕೆಲಸ ಮಾಡಿದರು. ಹೀಗೆ ಚಿಂತನೆಯೊಂದಿಗೆ ಕ್ರಿಯೆಯನ್ನೂ ಬೆಳೆಸಿಕೊಂಡವರು ಅವರು. ಅವರ ಅಭಿಪ್ರಾಯಗಳಿಗೆ ಎಷ್ಟೋ ಜನ ಪ್ರತಿಭಟಿಸಿದರು, ಅವರ ಕೆಲಸಕ್ಕೆ ವಿರೋಧ ಬಂದಿತು. ಏಕಾಕಿಯಾದರೂ ತಮ್ಮ ಕೆಲಸವನ್ನು ಅವರು ಮುಂದುವರಿಸಿದರು. ಅಜ್ಞಾನ, ದಬ್ಬಾಳಿಕೆ, ಅಕ್ರಮಗಳ ವಿರುದ್ಧ ಹೋರಾಡಿದರು. ವಿದ್ಯಾಭ್ಯಾಸ, ಮಹಿಳೆಯರ ಉದ್ಧಾರ, ಬಾಲ್ಯವಿವಾಹ ವಿರೋಧ, ವಿಧವೆಯರ ವಿವಾಹ ಮೊದಲಾದ ಸಮಾಜಸುಧಾರಣೆಯ ಕೆಲಸಗಳಲ್ಲಿ ಮಗ್ನರಾದರು.