Bharathikrishna Tirtharu / ಭಾರತೀಕೃಷ್ಣತೀರ್ಥರು - Mera Library
0

Please enter AND, OR, NOT to narrow your search results
 
To
 
 
 
 
Bharathikrishna Tirtharu / ಭಾರತೀಕೃಷ್ಣತೀರ್ಥರು

Bharathikrishna Tirtharu / ಭಾರತೀಕೃಷ್ಣತೀರ್ಥರು

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ದೇಶ ಸೇವಕರಲ್ಲಿ ಮೂರು ಬಗೆಯ ಜನ ಇರುತ್ತಾರೆ. ಮೊದಲ ವರ್ಗದ ಜನ ರಾಜಕೀಯ ಸಂಘ ಸಂಸ್ಥೆಗಳಲ್ಲಿ ಇದ್ದು ಕೆಲಸ ಮಾಡುವವರು. ಇವರು ಪದೇ ಪದೇ ಜನಗಳ ಕಣ್ಣಿಗೆ ಕಾಣುತ್ತಾ ಇರುವವರು. ಎರಡನೆಯ ವರ್ಗದ ಜನ ದೇಶದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮುಂತಾದ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ದುಡಿಯುತ್ತಾರೆ. ಇವರೂ ಸಹ ಜನಗಳ ದೃಷ್ಟಿಗೆ ಆಗಾಗ ಗೋಚರಿಸುತ್ತ ಇರುತ್ತಾರೆ. ಮೂರನೆಯ ವರ್ಗದ ಜನ ದೇಶದ ನೈತಿಕ ಮತ್ತು ಧಾರ್ಮಿಕ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುತ್ತಾರೆ. ಇವರು ಜನರ ದೃಷ್ಟಿಗೆ ಅಷ್ಟಾಗಿ ಬೀಳುವುದಿಲ್ಲ. ಇವರು ಧರ್ಮ, ಸತ್ಯ, ಅಹಿಂಸೆ ಇವುಗಳನ್ನು ನಂಬಿ ಪಾಲಿಸುತ್ತಾರೆ. ಇತರರಿಗೆ ಉಪಕಾರ ಮಾಡುವುದು, ಜನಗಳಲ್ಲಿ ಪರಸ್ಪರ ಸ್ನೇಹವನ್ನು ಉಂಟು ಮಾಡುವುದು, ಕಷ್ಟದಲ್ಲಿರುವವರಿಗೆ ನೆರವಾಗುವುದು ಇವೇ ಇವರ ಜೀವನದ ಗುರಿ. ಎಲ್ಲ ಜನರಿಗೂ ಒಳ್ಳೆಯದಾಗಬೇಕು ಸುಖಸಂತೋಷ ದೊರಕಬೇಕು ಎಂಬುದೇ ಇವರ ಆಶಯ. ಇವರಿಗೆ ಕೀರ್ತಿಯ ಆಸೆಯಿಲ್ಲ, ಪ್ರಸಿದ್ಧಿಯ ಅಪೇಕ್ಷೆಯಿಲ್ಲ. 
ಸ್ವಾಮಿ ಶ್ರೀ ಭಾರತೀಕೃಷ್ಣತೀರ್ಥರು ಇಂತಹ ಒಬ್ಬ ಮಹಾಪುರುಷರು.