Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.
ಇಪ್ಪತ್ತನೆಯ ಶತಮಾನದ ಭಾರತದಲ್ಲಿ ಬೌದ್ಧಧರ್ಮವನ್ನು ಜೀವಂತ ಧರ್ಮವಾಗಿ ಪುನಶ್ಚೇತನಗೊಳಿಸಿದ ಕೀರ್ತಿ ಧರ್ಮಾನಂದ ಕೊಸಾಂಬಿ (1876–1947) ಅವರಿಗೆ ಸಲ್ಲುತ್ತದೆ. ಈ ಕಾರ್ಯದಲ್ಲಿ ಅವರು ಧರ್ಮದ ಸಿದ್ಧಾಂತವನ್ನು ಮತ್ತು ಆಚರಣೆಗಳನ್ನು ಮತ್ತೆ ಪರಿಚಯಿಸಿದ್ದಲ್ಲದೆ, ಅದರ ಪ್ರಸಕ್ತತೆಯನ್ನು ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತಗಳೊಂದಿಗೆ ಸ್ಥಾಪಿಸುವುದರ ಮೂಲಕ ಹೊಸದಾದ ಮತ್ತು ಸಮಂಜಸವಾದ ಜಾಗತಿಕ ದೃಷ್ಟಿಕೋನವನ್ನು ಸೃಷ್ಟಿಸಿದ್ದಾರೆ. 1912ರಿಂದ 1931ರವರೆಗಿನ ಅವರ ಅನುಭವ ಕಥನವು ‘ಖುಲಾಸಾ’ ಶೀರ್ಷಿಕೆಯ ಕೆಳಗೆ ಲೇಖನಗಳ ಸರಣಿಯಾಗಿ ಬೆಳಕು ಕಂಡಿದೆ.