RIGVEDA PRAVESHIKE : AITIHYA MATTU VAASTAVA / ಋಗ್ವೇದ ಪ್ರವೇಶಿಕೆ - Mera Library
0

Please enter AND, OR, NOT to narrow your search results
 
To
 
 
 
 
RIGVEDA PRAVESHIKE : AITIHYA MATTU VAASTAVA / ಋಗ್ವೇದ ಪ್ರವೇಶಿಕೆ

RIGVEDA PRAVESHIKE : AITIHYA MATTU VAASTAVA / ಋಗ್ವೇದ ಪ್ರವೇಶಿಕೆ

ಐತಿಹ್ಯ ಮತ್ತು ವಾಸ್ತವ
0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಮಾನವನ ನಾಗರಿಕತೆಯ ಇತಿಹಾಸದಲ್ಲಿ ಋಗ್ವೇದಕ್ಕಿಂತಲೂ ಪ್ರಾಚೀನವಾದವು ಹಲವಿದೆ. ಹರಪ್ಪ-ಮೊಹೆಂಜೊದಾರೊ, ಬ್ಯಾಬಿಲೋನಿಯಾ, ಈಜಿಪ್ಟ್ ಮುಂತಾದವು ಅದಕ್ಕೆ ಉದಾಹರಣೆ. ಆದರೆ ಋಗ್ವೇದವೇ ಮಾನವ ಸಂಸ್ಕೃತಿಯಲ್ಲಿ ಆದಿಗ್ರಂಥ. ಅಷ್ಟು ವಿಪುಲವಾದ ಸಾಹಿತ್ಯವು ಆ ಕಾಲಕ್ಕೆ ಬೇರಾವುದೂ ಇರಲಿಲ್ಲ. ಅದರ ಉದಾತ್ತತೆಯನ್ನು ಗುರುತಿಸಿ, ಗೌರವಿಸಲು ನಮ್ಮಲ್ಲಿ ಅದನ್ನು ‘ಅಪೌರುಷೇಯ’ ಎನ್ನಲಾಗಿದೆ. ಋಗ್ವೇದವನ್ನು ಅರ್ಥೈಸುವಾಗ ಸಲ್ಲದ ಭಾವುಕತೆಯು ನಮ್ಮ ಸಂಪ್ರದಾಯದಲ್ಲಿ ಬೆಳೆದುಬಂದಿದೆ. ಕಳೆದೆರಡು ಶತಮಾನಗಳಲ್ಲಿ ಋಗ್ವೇದವನ್ನು ಚಾರಿತ್ರಿಕವಾಗಿ ಅಧ್ಯಯನ ಮಾಡಿರುವ ವಿದ್ವಾಂಸರು ಅನೇಕರಿದ್ದಾರೆ. ಆ ಪೈಕಿ ಕೆಲವರು ಋಗ್ವೇದದಲ್ಲಿ ಅಗಾಧ ನಿಗೂಢತೆಯನ್ನು ಅರಸಲು ಮುಂದಾಗಿದ್ದಾರೆ, ಇನ್ನು ಕೆಲವರು ಆಧುನಿಕ ಜ್ಞಾನದ ಅನೇಕ ಪ್ರಕಾರಗಳನ್ನು ಅದರ ಮೇಲೆ ಆರೋಪಿಸುವ ಹುಮ್ಮಸ್ಸು ಪ್ರಕಟಿಸಿದ್ದಾರೆ. ನಿಜಕ್ಕೂ ಋಗ್ವೇದದ ಅಧ್ಯಯನ ನಡೆಯಬೇಕಾದ್ದು ಚಾರಿತ್ರಿಕೆ ಮತ್ತು ಸಾಮಾಜಿಕ ನೆಲೆಯಲ್ಲಿ. ನಮಗಿನ್ನೂ ಪೂರ್ತಿಯಾಗಿ ಅರ್ಥವಾಗಿಲ್ಲದ ಭಾಗಗಳು ಋಗ್ವೇದದಲ್ಲಿ ಇವೆಯಾದರೂ ಅಂದಿನ ಸಮಾಜದ ಚಿತ್ರಣವನ್ನು ಪಡೆಯಲು ಭೇದಿಸಲಾಗದ ಮುಗ್ಗಟ್ಟೇನೂ ಇಲ್ಲ. ದಸ್ಯುಗಳ ಅವಹೇಳನ, ಇಂದ್ರನ ಪ್ರತಾಪ, ವರುಣನ ನೈತಿಕ ಸಂಹಿತೆ, ಪಣಿಗಳ ಸಂಪತ್ತಿನ ಲೂಟಿ, ಸೂರ್ಯಾಳ ಮದುವೆಯ ರಮ್ಯತೆ, ಜಗತ್ತಿನ ವಿಸ್ಮಯಗಳನ್ನು ಕಂಡಾಗಿನ ಬೆರಗು, ದೇವತೆಗಳನ್ನು ಆತ್ಮೀಯರಂತೆ ನಡೆಸಿಕೊಳ್ಳುವುದು, ಇವೆಲ್ಲ ಅಂದಿನ ಸಮಾಜದ ಅಂತಸ್ಸಂಬಂಧ ಮತ್ತು ಘರ್ಷಣೆಗಳು, ಜ್ಞಾನತೃಷೆ, ಸಂಕೀರ್ಣ ಆಚರಣೆಗಳ ವಿಕಾಸ ಮುಂತಾದುವನ್ನು ನಮ್ಮ ಮುಂದೆ ತೆರೆದಿಡುತ್ತವೆ. ಋಗ್ವೇದದ ಕಾವ್ಯಾತ್ಮಕತೆಯಂತೂ ಅನನ್ಯವಾದದ್ದು. ಸಾಮಾನ್ಯ ಓದುಗರು ಸಹ ಋಗ್ವೇದವನ್ನು ಆಪ್ತವಾಗಿಸಿಕೊಳ್ಳುವುದು ಆವಶ್ಯಕ ಮತ್ತು ಅದು ಸಾಧ್ಯವಿದೆ. ಪ್ರಸ್ತುತ ಗ್ರಂಥವು ಆ ದಿಕ್ಕಿನಲ್ಲಿ ಒಂದು ಸ್ತುತ್ಯರ್ಹ ಪ್ರಯತ್ನವಾಗಿದೆ. ಆಕರ ಗ್ರಂಥವಾಗಿಯೂ ಅದಕ್ಕೆ ಮಹತ್ವವಿದೆ.