M.Hiriyanna / ಎಂ. ಹಿರಿಯಣ್ಣ - Mera Library
0

Please enter AND, OR, NOT to narrow your search results
 
To
 
 
 
 
M.Hiriyanna / ಎಂ. ಹಿರಿಯಣ್ಣ

M.Hiriyanna / ಎಂ. ಹಿರಿಯಣ್ಣ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಹಿರಿಯಣ್ಣನವರು ಜೀವನದಲ್ಲಿ ಆರಿಸಿಕೊಂಡದ್ದು ಬಹಳ ಕಷ್ಟವಾದ ಕ್ಷೇತ್ರಗಳನ್ನು – ಸಂಸ್ಕೃತ ಮತ್ತು ಭಾರತೀಯ ತತ್ತ್ವಶಾಸ್ತ್ರವನ್ನು. ತಮ್ಮ ಬಾಳನ್ನೇ ಇವುಗಳ ಅಧ್ಯಯನಕ್ಕೆ ಮುಡಿಪು ಮಾಡಿದರು. ಅಸಮಾನವಾದ, ಖಚಿತವಾದ ವಿದ್ವತ್ತನ್ನು ಪಡೆದರು. ತನ್ನ ವಿದ್ವತ್ತಿನ ಸಿರಿಯನ್ನು ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ, ಪುಸ್ತಕಗಳಲ್ಲಿ ಇತರರಿಗೆ ಲಭ್ಯ ಮಾಡಿಕೊಟ್ಟರು. ಕಥೆ, ಕಾದಂಬರಿ, ಕವನ ಬರೆದರೆ ಬಹುಜನ ಓದುತ್ತಾರೆ, ಬರೆದವರಿಗೆ ಜನಪ್ರಿಯತೆ ಬರುತ್ತದೆ, ವಿದ್ವತ್ತಿನ ಕ್ಷೇತ್ರ ಇಂತಹುದಲ್ಲ. ಇದಕ್ಕೆ ತಪಸ್ಸು ಬೇಕು, ಆದರೆ ಇದರ ಹಿರಿಮೆಯನ್ನು ಗುರುತಿಸುವವರು ಕೆಲವರೇ. ಆದರೆ ಯಾವ ದೇಶಕ್ಕೆ ಆಗಲಿ ಕವನ, ಕಥೆ, ಕಾದಂಬರಿ ರಚಿಸುವವರೂ ಬೇಕು, ಇಂತಹ ವಿದ್ವಾಂಸರೂ ಬೇಕು. ಹಿರಿಯಣ್ಣ ನವರು ವಿದ್ವತ್ತನ್ನು ಗಳಿಸಿದರು, ಅದು ರಕ್ತಗತವಾದಾಗ ಸ್ವಭಾವಕ್ಕೆ ಬರುವ ನಯ, ಬಾಳಿಗೆ ಬರುವ ಕಾಂತಿ ಇವನ್ನು ಪಡೆದುಕೊಂಡರು. ವಿದ್ವತ್ತಿಗೆ ಸೌಜನ್ಯಕ್ಕೆ, ಸಂಸ್ಕೃತಿಗೆ ಮಾದರಿಯಾದರು.