Ramadasaru / ರಾಮದಾಸರು - Mera Library
0

Please enter AND, OR, NOT to narrow your search results
 
To
 
 
 
 
Ramadasaru / ರಾಮದಾಸರು

Ramadasaru / ರಾಮದಾಸರು

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ರಾಮದಾಸರು ಕೇವಲ ಮಂತ್ರಧ್ಯಾನವೊಂದಕ್ಕೇ ಪ್ರಾಮುಖ್ಯತೆ ಕೊಟ್ಟಿರಲಿಲ್ಲ. ದೇಶ ಸಂಪದ್ಭರಿತವಾಗ ಬೇಕಾದರೆ ಹಳ್ಳಿಗಳ ಉದ್ಧಾರವಾಗಬೇಕು ಎಂಬ ಗಾಂಧೀಜಿಯ ತತ್ವವನ್ನು ಅವರು ತುಂಬ ಮೆಚ್ಚಿಕೊಂಡಿದ್ದರು. ಅವರು ಹಲವಾರು ಜನರಿಗೆ ಶಿಕ್ಷಣವನ್ನೂ ಉದ್ಯೋಗವನ್ನೂ ಕೊಟ್ಟರಲ್ಲದೆ ಸ್ವಂತ ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ ಧನಸಹಾಯ ಮಾಡಿದರು. ಅಂಥವರ ಯೋಗಕ್ಷೇಮ ಚಿಂತನೆಯೇ ವಿದ್ಯಾವಂತರಲ್ಲಿ, ಧನವಂತರಲ್ಲಿ ಜಾಗೃತವಾಗಿರಬೇಕೆಂದು ಒತ್ತಿ ಹೇಳಿದರು. ಗಾಂಧೀಜಿಯ ಮೂಲಶಿಕ್ಷಣ ತತ್ವವನ್ನು ಅವರು ಆಳವಾಗಿ ಅರ್ಥ ಮಾಡಿಕೊಂಡಿದ್ದರು. ಬಡವರು - ಬಡತನ ಎಂದರೆ ಸಾಕು, ಸ್ವಾಮಿಗಳ ಹೃದಯದಲ್ಲಿ ಕರುಣೆ ಉಕ್ಕುತ್ತಿತ್ತು. ದೀನದಲಿತರಿಗೆ ಯಾವ ವಿಧವಾಗಿ ಸಹಾಯ ಮಾಡಬೇಕಾದರೂ ಅವರು ಮುನ್ನುಗ್ಗುತ್ತಿದ್ದರು. ಕಷ್ಟದಲ್ಲಿರುವವರನ್ನು ಕಂಡರೆ ಸ್ವಾಮಿಗಳು ಅತ್ತುಬಿಡುತ್ತಿದ್ದರು. ರಾಮದಾಸರು ದರಿದ್ರನಲ್ಲೇ ದೇವರನ್ನು ಕಾಣಲು ಸಾಧ್ಯ ಎನ್ನುತ್ತಿದ್ದರು. ಇವರ ಕಥೆ ಇಲ್ಲಿದೆ.