A V Varadachar / ಎ. ವಿ. ವರದಾಚಾರ್ - Mera Library
0

Please enter AND, OR, NOT to narrow your search results
 
To
 
 
 
 
A V Varadachar / ಎ. ವಿ. ವರದಾಚಾರ್

A V Varadachar / ಎ. ವಿ. ವರದಾಚಾರ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಕನ್ನಡ ರಂಗಭೂಮಿಯ ವಿಷಯದಲ್ಲಿ ಆಸ್ಥೆ ತಳೆದವರಿಗೆ ‘ನಾಟಕದ ವರದಾಚಾರ್ಯ’ರ ಹೆಸರು ತುಂಬಾ ಪರಿಚಿತ. ತಮ್ಮ ಜೀವಿತದ ಮುಕ್ಕಾಲು ಪಾಲನ್ನು ಅವರು ಕನ್ನಡ ವೃತ್ತಿರಂಗದ ಏಳಿಗೆಗಾಗಿ ಮುಡುಪಿಟ್ಟರು. ತುಂಬ ಪ್ರಭಾವಶಾಲಿಯೆನಿಸಿದ ‘ರತ್ನಾವಳೀ ನಾಟಕ ಮಂಡಳಿ’ಯನ್ನು ಕಟ್ಟಿದರು. ಕಲಾವಂತರನ್ನು ಹುಡುಕಿ, ಕೂಡಿಸಿ, ರಂಗಶಿಕ್ಷಣ ಕೊಟ್ಟು ನಾಟಕಕಲೆಯಲ್ಲಿ ಪರಿಣತರನ್ನಾಗಿ ಮಾಡಿ, ಅವರಿಗೂ ತಮಗೂ ಕೀರ್ತಿ ತಂದುಕೊಂಡರು. ಕನ್ನಡ ನಾಟಕಗಳನ್ನು ಅಭಿನಯಿಸುತ್ತ ಕನ್ನಡ ಭೂಮಿಯ ಉದ್ದಗಲದಲ್ಲಿ ಮಾತ್ರವೇ ಅಲ್ಲದೆ, ನೆರೆಯ ತಮಿಳು, ತೆಲುಗು ರಾಜ್ಯಗಳಲ್ಲಿಯೂ ಸಂಚರಿಸಿ, ಅಲ್ಲಿನ ಜನ ನಮ್ಮ ನಾಟಕವನ್ನು ಮೆಚ್ಚಿ ಹೊಗಳುವಂತೆ ಮಾಡಿದರು. ಪ್ರದರ್ಶನವು ಉತ್ತಮಗೊಳ್ಳುವ ಸಲುವಾಗಿ, ಅವರ ಕಾಲದಲ್ಲಿ ಕ್ರಾಂತಿಕಾರಕ ಎನಿಸುವಂತಹ ಮಾರ್ಪಾಡುಗಳನ್ನೂ ಸುಧಾರಣೆಗಳನ್ನೂ ಮಾಡಿದರು. ಸ್ವತಃ ವರದಾಚಾರ್ಯರ ವೈಶಿಷ್ಟ್ಯವನ್ನು ಹತ್ತುಪಾಲು ಹಿಗ್ಗಿಸಿ, ನೋಡಿದವರು ಎಂದೆಂದಿಗೂ ಮರೆಯದಂತೆ ಮನಸ್ಸಿನ ಮೇಲೆ ಅಚ್ಚೊತ್ತಿಬಿಡುವ ಕಲಾವಂತಿಕೆ. ಅವರ ಅಭಿನಯವನ್ನು ಕಂಡಿದ್ದವರು ಹೇಳುವಂತೆ ‘ನುಡಿಯಲ್ಲಿ ಹಿಡಿಯಲಾಗದ ಕಲಾಸೌಭಾಗ್ಯ ಅವರದು.’