Vedanta Deshikaru / ವೇದಾಂತದೇಶಿಕರು - Mera Library
0

Please enter AND, OR, NOT to narrow your search results
 
To
 
 
 
 
Vedanta Deshikaru / ವೇದಾಂತದೇಶಿಕರು

Vedanta Deshikaru / ವೇದಾಂತದೇಶಿಕರು

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ವೇದಾಂತದೇಶಿಕರು ಮನುಷ್ಯರು ಹೇಗೆ ಬಾಳಬೇಕು ಎಂದು ಜನಸಾಮಾನ್ಯರಿಗೆ ತಿಳಿಸಿಕೊಟ್ಟರು. ಅದಕ್ಕಿಂತ ಮುಖ್ಯವಾದ ಅಂಶ ಎಂದರೆ ತಾವು ಉಪದೇಶಿಸಿದ ತತ್ವಕ್ಕನುಸಾರವಾಗಿ ನಡೆದು ತೋರಿದರು ವೇದಾಂತದೇಶಿಕರು. ‘ರಾಗ ದ್ವೇಷಗಳಿಂದ ಮನಸ್ಸು ದೂರವಾಗಬೇಕು. ಮಾತಿನಲ್ಲಿ ಸುಳ್ಳು ಬರಬಾರದು. ಮತ್ತೊಬ್ಬರನ್ನು ಹಿಂಸಿಸಬಾರದು.’ ‘ಭಗವಂತನಲ್ಲಿ ಭಕ್ತಿಯನ್ನು ಬೇಡಬೇಕು, ಜ್ಞಾನವನ್ನು ಬೇಡಬೇಕು. ಬೇರೆ ಯಾವ ಪ್ರಯೋಜನವನ್ನೂ ಬೇಡಬಾರದು.’ ‘ಸಾತ್ವಿಕರನ್ನು ಸಂತೋಷಪಡಿಸಬೇಕು, ಸಜ್ಜನರ ನಡೆಯನ್ನು ಅನುಸರಿಸಬೇಕು. ಪಾಪಕ್ಕೆ ಹೆದರಬೇಕು. ಐಹಿಕವಾದ ಪ್ರಯೋಜನವನ್ನು ತೃಣಸಮಾನವಾಗಿ ಕಾಣಬೇಕು. ಭಗವಂತನಲ್ಲಿ ರಕ್ಷಣೆಯ ಭಾರವನ್ನು ವಹಿಸಬೇಕು. ಅವನ ದಯೆಗೆ ಕಾಯಬೇಕು’ ಇದು ಅವರ ಉಪದೇಶ. ಇದಕ್ಕನುಸಾರವಾಗಿ ಅವರು ಬಾಳಿದರು. ಸನ್ಮಾನವಾದಾಗ ಅವರು ಹಿಗ್ಗಲಿಲ್ಲ. ಅಪಮಾನವಾದಾಗ ಕುಗ್ಗಲಿಲ್ಲ. ಗಂಗೆಯ ಮಡುವಿನಂತೆ ಗಂಭೀರವಾಗಿ ಬಾಳಿದರವರು. ಭಗವಂತನ ಸೇವೆ, ಜನರ ಸೇವೆ ಇದಕ್ಕಾಗಿ ಬಾಳಿದ ಬಹೂದೊಡ್ಡ ವ್ಯಕ್ತಿ ವೇದಾಂತದೇಶಿಕರು.