Vinu Mankad / ವಿನೂ ಮಂಕಡ್ - Mera Library
0

Please enter AND, OR, NOT to narrow your search results
 
To
 
 
 
 
Vinu Mankad / ವಿನೂ ಮಂಕಡ್

Vinu Mankad / ವಿನೂ ಮಂಕಡ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಮಂಕಡ್ ಪ್ರಪಂಚದ ಕ್ರಿಕೆಟ್ ಚರಿತ್ರೆಯಲ್ಲಿ ಅತ್ಯುತ್ತಮ ಎಡಗೈ ಸ್ಪಿನ್ನರುಗಳಲ್ಲಿ ಒಬ್ಬರು. ಮಂಕಡ್ ವೃತ್ತಿಗಾರ (ಪ್ರೊಫೆಷನಲ್) ಆಟಗಾರರಾಗಿದ್ದರು. ಕ್ರಿಕೆಟ್ ಆಡುವುದೇ ಅವರ ಉದ್ಯೋಗ.ಕ್ರಿಕೆಟ್ ವಿನೂ ಮಂಕಡ್ ಅಸಾಧಾರಣ ಕ್ರಿಕೆಟ್ ಕೋಚ್ ಆಗಿದ್ದರೆಂಬುದರಲ್ಲಿ ಸಂದೇಹವಿಲ್ಲ. ಆಟವನ್ನು ಆಡುವುದಷ್ಟೇ ಅಲ್ಲ, ಅದನ್ನು ಹೇಳಿಕೊಡುವ ಕಲೆಯೂ ಅವರಿಗೆ ಚೆನ್ನಾಗಿ ಕರಗತವಾಗಿತ್ತು.ವಿದ್ಯಾರ್ಥಿಗಳಿಗೆ ಅಗತ್ಯವಾದ ಉದ್ದೀಪನ ನೀಡುವುದೇ ಅವರ ಉದ್ದೇಶವಾಗಿತ್ತು. ‘ಅವನಂತೆ ನಾನಾಗಬೇಕು’ ಎನ್ನುವ ಮಹಾತ್ವಾಕಾಂಕ್ಷೆಯ ಬೀಜವನ್ನು ಬಿತ್ತುತ್ತಿದ್ದರು.ತುಂಬ ಸೌಜನ್ಯದ ಸ್ವಭಾವದ ವಿನೂ ಮಂಕಡ್ ಅವರು, ಕಿರಿಯ ಆಟಗಾರರಿಗೆ ತಮ್ಮ ಕೌಶಲ ಮತ್ತು ಅನುಭವವನ್ನು ಧಾರೆ ಎರೆಯುವುದರಲ್ಲಿ ಸ್ವಲ್ಪವೂ ಹಿಂದೇಟು ಹಾಕುತ್ತಿರಲಿಲ್ಲ. ತರಬೇತಿ ನೀಡುತ್ತಿದ್ದ ಹುಡುಗರೊಂದಿಗೆ ಹುಡುಗರಾಗಿ ಬೆರೆಯುತ್ತಿದ್ದ ಮಂಕಡ್, ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದಾದರೂ ವಿಷಯದಲ್ಲಿ ಚರ್ಚೆ ಆರಂಭಿಸುತ್ತಿದ್ದರು. ಆ ಚರ್ಚೆಯ ಮೂಲಕ ಅನೇಕ ಪ್ರಮುಖ ಆಟಗಾರರ ಪರಿಚಯ ಮಾಡಿಕೊಡುತ್ತಿದ್ದರಲ್ಲದೆ, ಆಟದ ಹಲವು ಸೂಕ್ಷ್ಮಗಳನ್ನು ತಿಳಿಸಿ ಕೊಡುತ್ತಿದ್ದರು.ಇವರ ಕಥೆ ಇಲ್ಲಿದೆ.