Aryabhata / ಆರ್ಯಭಟ - Mera Library
0

Please enter AND, OR, NOT to narrow your search results
 
To
 
 
 
 
Aryabhata / ಆರ್ಯಭಟ

Aryabhata / ಆರ್ಯಭಟ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಭಾರತೀಯ ವಿಜ್ಞಾನಿಗಳಲ್ಲಿ ಆರ್ಯಭಟನ ಸ್ಥಾನ ತುಂಬಾ ವಿಶೇಷವಾದುದು. ಖಗೋಳ -ಗಣಿತ ಶಾಸ್ತ್ರಗಳಲ್ಲಿ ಅಪಾರ ಜ್ಞಾನವನ್ನು ಪಡೆದಿದ್ದ ಈತನ ಕೃತಿ ಭಾರತದಲ್ಲಿ ಸರ್ವತ್ರ ಮಾನ್ಯವಾಗಿದ್ದುದು ಮಾತ್ರವಲ್ಲ, ಪಂಚಾಂಗಗಳ ನಿರ್ಮಾಣದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿತ್ತು. ಬೀಜಗಣಿತ, ತ್ರಿಕೋಣಮಿತಿ ಮತ್ತು ಖಗೋಳ ವಿಜ್ಞಾನಕ್ಕೆ ಆರ್ಯಭಟನ ಕೊಡುಗೆ ತುಂಬಾ ಮಹತ್ತರವಾದುದು, ಮಾತ್ರವೆ ಅಲ್ಲದೆ ಆ ಶಾಸ್ತ್ರಗಳ ವ್ಯಾಪಕ ಬೆಳವಣಿಗೆಗೆ ಅಡಿಗಲ್ಲಿನಂತಿದೆ. ಆರ್ಯಭಟನನ್ನು ಭಾರತೀಯ ಆದ್ಯ ಗಣಿತಾಚಾರ್ಯ ಹಾಗೂ ಖಗೋಳ ವಿಜ್ಞಾನಿ ಎಂಬುದನ್ನು ಗುರುತಿಸಿ ಅವನ ನೆನಪಿಗಾಗಿ ಭಾರತದಲ್ಲಿ ತಯಾರಾದ ಮೊದಲನೆಯ ಕೃತಕ ಉಪಗ್ರಹವನ್ನು ಅವನ ಹೆಸರಿನಿಂದಲೇ ಕರೆದು 1975 ಏಪ್ರಿಲ್ 19ರಂದು ಬಾಹ್ಯಾಕಾಶಕ್ಕೆ ಹಾರಿ ಬಿಟ್ಟಿದ್ದು ಹೆಮ್ಮೆಯ ಸಂಗತಿಯೇ. ಭಾರತೀಯ ಜ್ಯೋತಿಶ್ಶಾಸ್ತ್ರವನ್ನು ಪ್ರತ್ಯಕ್ಷಕ್ಕೆ ವಿರುದ್ಧವಾಗದಂತೆ ಪರಿಷ್ಕರಿಸಿ ಹೊಸ ವಿಷಯಗಳನ್ನು ತಿಳಿಸಿದ ಸುಪ್ರಸಿದ್ಧ ಖಗೋಳಜ್ಞನ ಹೆಸರನ್ನು ಇರಿಸಿದ್ದು ಸಾರ್ಥಕವೇ.