Basavanna / ಬಸವಣ್ಣ - Mera Library
0

Please enter AND, OR, NOT to narrow your search results
 
To
 
 
 
 
Basavanna / ಬಸವಣ್ಣ

Basavanna / ಬಸವಣ್ಣ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

"ಬಸವಣ್ಣನವರನ್ನು ಅನುಸರಿಸಿ ಆಗ ಅನೇಕ ಶಿವಶರಣರು ವಚನಗಳನ್ನು ಬರೆದರು. ಈ ವಚನಗಳು ಜನರಲ್ಲಿ ಪ್ರಚಾರವಾದವು. ಅವುಗಳಲ್ಲಿ ಧರ್ಮ, ನೀತಿ, ಸಮಾಜರಚನೆಗಳನ್ನು ಕುರಿತ ವಿಚಾರಗಳಿಂದ ಜನಜಾಗೃತಿಯಾಯಿತು. ನೀತಿಯ ಮಾತುಗಳು ಜನರಿಗೆ ಸುಲಭವಾಗಿ ತಿಳಿಯುವಂತಾಯಿತು. ಹೊಸ ಬಗೆಯ ಸಾಮಾಜಿಕ ವ್ಯವಸ್ಥೆ ತಲೆದೋರಿತು.ಪ್ರತಿಯೊಬ್ಬರೂ ತಂತಮ್ಮ ಉದ್ಯೋಗ ಮಾಡುತ್ತಲೆ ಧಾರ್ಮಿಕ ಆಚರಣೆಯಲ್ಲಿ ತೊಡಗಬೇಕೆಂದು ಬಸವಣ್ಣನವರು ಬೋಧಿಸಿದರು. ಧಾರ್ಮಿಕ ದೃಷ್ಟಿಯಿಂದ ಕೈಗೊಳ್ಳುವ ಉದ್ಯೋಗವನ್ನು ಅವರು ಕಾಯಕ ಎಂದು ಕರೆದರು. ಎಲ್ಲರೂ ಕಾಯಕ ಕೈಗೊಳ್ಳಬೇಕಾದುದರಿಂದ ಸಮಾಜದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿತು. ಹೀಗೆ ಬಸವಣ್ಣನವರಿಂದ ಧರ್ಮ, ನೀತಿ, ಸಮಾಜವ್ಯವಸ್ಥೆ, ಭಾಷೆ, ಸಾಹಿತ್ಯ, ಆರ್ಥಿಕ ಪರಿಸ್ಥಿತಿಗಳಲ್ಲಿ ದೊಡ್ಡ ಸುಧಾರಣೆಯುಂಟಾಯಿತು.ಬಸವಣ್ಣನವರು ರೂಪಿಸಿದ ಶರಣ ಸಮಾಜ ಮತ್ತು ಅದರ ಉನ್ನತ ತತ್ತ್ವಗಳು ಜನತೆಯಲ್ಲಿ ಮಿಂಚಿನ ಸಂಚಾರವನ್ನು ತಂದವು. ಬಸವಣ್ಣನವರ ಕೀರ್ತಿಯು ಎಲ್ಲ ಕಡೆಗೂ ಪಸರಿಸಿತು. ಬಸವಣ್ಣನವರು ದೇವಮಾನವರಾಗಿ ಬಾಳಿದರು. ಎಲ್ಲರಿಗೂ ದೇವಮಾನವರಾಗುವ ಹಾದಿಯನ್ನು ತೋರಿಸಿಕೊಟ್ಟರು. ಎಂಟು ನೂರು ವರ್ಷಗಳು ಉರುಳಿದ್ದರೂ ಅವರು ಬಿಟ್ಟ ಬೆಳಕು ಪ್ರಕಾಶಮಾನವಾಗಿಯೇ ಉಳಿದಿದೆ. ಅಂತಹ ಜೀವಜ್ಯೋತಿಯಾಗಿದ್ದಾರೆ, ಬಸವಣ್ಣನವರು."