Chandraguptha Mourya / ಚಂದ್ರಗುಪ್ತ ಮೌರ್ಯ - Mera Library
0

Please enter AND, OR, NOT to narrow your search results
 
To
 
 
 
 
Chandraguptha Mourya / ಚಂದ್ರಗುಪ್ತ ಮೌರ್ಯ

Chandraguptha Mourya / ಚಂದ್ರಗುಪ್ತ ಮೌರ್ಯ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಚಂದ್ರಗುಪ್ತನು ಶ್ರೀಸಾಮಾನ್ಯನಾಗಿ ಹುಟ್ಟಿ ಬೆಳೆದ. ಆದರೆ ತನ್ನ ಭುಜಬಲದಿಂದ ಭಾರತದ ನೆಲವನ್ನು ಪರಕೀಯರ ದಾಸ್ಯದಿಂದ ಮುಕ್ತಗೊಳಿಸಿದ; ತುಂಡು ರಾಜ್ಯಗಳ ರಾಜರಿಂದ ತುಂಬಿಹೋಗಿದ್ದ ಭರತ ಭೂಮಿಯನ್ನು ಒಂದುಗೂಡಿಸಿದ; ದೇಶದಲ್ಲಿ ಅತ್ಯುತ್ತಮ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿದ; ಪ್ರಜಾಕೋಟಿಗೆ ಹಿತ ಸಾಧಿಸಿ, ಶಾಂತಿ-ಸಮೃದ್ಧಿ ನೀಡಿದ. ಅವನ ಬಾಹುಬಲ, ಕಾರ್ಯಸಾಧನೆ, ದೇಶಭಕ್ತಿ, ಸಂಘಟನಾಶಕ್ತಿ, ಉತ್ತಮ ಗುಣ-ನಡವಳಿಕೆ ಯಾರನ್ನಾದರೂ ಆಕರ್ಷಿಸುತ್ತವೆ. ಅವನ ಬಗ್ಗೆ ಅಪಾರ ಅಭಿಮಾನ ಹುಟ್ಟಿಸುತ್ತದೆ. ಅವನು ಬದುಕಿ ಬಾಳಿದ್ದು ಸುಮಾರು 2300 ವರ್ಷಗಳ ಹಿಂದೆ. ಚಂದ್ರಗುಪ್ತ ಮೌರ್ಯನು ಭಾರತದ ಇತಿಹಾಸ ನಿರ್ಮಾಪಕರ ಉಜ್ವಲ ಸಾಲಿಗೆ ಸೇರುವ ವ್ಯಕ್ತಿ. ಕಾರ್ಯಶೀಲತೆ, ಸತತ ಸಾಧನಾಶೀಲತೆ ಹಾಗೂ ವಿಲಕ್ಷಣ ಬುದ್ಧಿಶಕ್ತಿಗಳೇ ಅವನ ಯಶಸ್ಸಿಗೆ ಕಾರಣ. ಅಸಾಧಾರಣ ಶೌರ್ಯ ಹಾಗೂ ಸಾಹಸ ಪ್ರವತ್ತಿ ಅವನಲ್ಲಿತ್ತು. ಅವನ ನಿಸ್ವಾರ್ಥ ದೇಶಭಕ್ತಿಯೇ ಅವನು ಗಳಿಸಿದ ಅಪಾರ ಜನಪ್ರಿಯತೆಗೆ ಕಾರಣ.