Gandhari / ಗಾಂಧಾರಿ - Mera Library
0

Please enter AND, OR, NOT to narrow your search results
 
To
 
 
 
 
Gandhari / ಗಾಂಧಾರಿ

Gandhari / ಗಾಂಧಾರಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಗಾಂಧಾರಿ ಭಾರತೀಯ ಗೃಹಿಣಿಯ ಆದರ್ಶ ಗುಣಗಳಿಂದ ಬಾಳಿದಳು. ಹೊಟ್ಟ್ಟೆಕಿಚ್ಚಿನವಳಾದರೂ ಅವಳಲ್ಲಿದ್ದ ಧರ್ಮನಿಷ್ಠೆ ಮೇಲೆದ್ದು ಕಾಣುತ್ತದೆ. ಅವಳಿಗೆ ಮಕ್ಕಳ ಮೇಲೆ ಮಮತೆ ಬಹಳ. ಅವರಿಗೆ ನೀತಿಯನ್ನು ಬೋಧಿಸುತ್ತಿದ್ದರೂ ತಿದ್ದಲಾರದೆ ಹೋದುದು ಅವಳ ದುರದೃಷ್ಟ. ಆಕೆಯ ಪಾತಿವ್ರತ್ಯ ಮೇಲುಮಟ್ಟದ್ದು. ಧೃತರಾಷ್ಟ್ರನ ಜೊತೆಯನ್ನು ಸಾಯುವವರೆಗೂ ಬಿಡಲಿಲ್ಲ. ಅವನು ಕುರುಡನೆಂದು ಅವನನ್ನು ಮದುವೆಯಾದ ದಿನದಿಂದ ತಾನೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ನೋಡುವ ಭಾಗ್ಯವನ್ನು ಬಿಟ್ಟುಕೊಟ್ಟಳು. ಅವಳಿಗೆ ಬಂದ ಕಷ್ಟಗಳು ಲೆಖ್ಖವಿಲ್ಲ. ಮಹಾರಾಜನ ತಾಯಿಯಾಗಿ ಅರಮನೆಯಲ್ಲಿದ್ದಳು, ನಿಜ. ಆದರೆ, ಧರ್ಮ ಯಾವುದು ಅಧರ್ಮ ಯಾವುದು ಎಂದು ತಿಳಿದಿದ್ದಳು. ಧರ್ಮನಿಷ್ಠಳಾಗಿದ್ದ ಅವಳು ತನ್ನ ಮಕ್ಕಳು ಕೆಟ್ಟ ಕೆಲಸಗಳನ್ನು ಮಾಡುವುದನ್ನು ನೋಡಬೇಕಾಯಿತು. ಅಷ್ಟು ಜನ ಮಕ್ಕಳು ಸತ್ತದ್ದನ್ನು ಕಾಣಬೇಕಾಯಿತು. ನೂರು ಜನ ಮಕ್ಕಳ ಸಾವು! ತನ್ನ ದುಷ್ಟರಾದ ಮಕ್ಕಳು ಅಳಿದ ನಂತರ ಪಾಂಡವರನ್ನು ಮಕ್ಕಳಂತೆ ಪ್ರೀತಿಸಿದಳು. ಅರಮನೆ ವಾಸ, ಸಂಚಾರ, ಆಶ್ರಮವಾಸ, ತಪಸ್ಸು, ಕೊನೆಗೆ ದೇಹತ್ಯಾಗ. ಈ ಎಲ್ಲ ವಿಷಯಗಳಲ್ಲಿಯೂ ಆಕೆ ಧೃತರಾಷ್ಟ್ರನ ಸಹಧರ್ಮಿಣಿ. ಇಂತಹ ಸಾಧ್ವೀಮಣಿ ನಮ್ಮ ಪುರಾಣಗಳಲ್ಲಾಗಲೀ ಇತಿಹಾಸದಲ್ಲಾಗಲೀ ಬೇರೆ ಯಾರೂ ಇಲ್ಲ. ಗಾಂಧಾರಿ ಒಬ್ಬಳೇ ಸರಿ.