Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.
ಹಸಿರಾಗಿ ಹೊರವಾಗಿ ಬೆಳೆದ ಗಿಡ. ಅದರ ಹಸಿರಾದ ಎಲೆಗಳ ಮೈ ಸೂರ್ಯನ ಬೆಳಕಿಗೆ ಮಿರಿಮಿರಿ ಮಿಂಚುತ್ತದೆ. ಒಂದು ಎಲೆಯನ್ನು ಕೀಳಬೇಕು ಎನಿಸುತ್ತದೆ. ಸರಿ, ಕಿತ್ತುಬಿಡುತ್ತೇವೆ. ಆಗ ಆ ಗಿಡದಲ್ಲಿ ಏನಾಗುತ್ತದೆ ಎಂದು ಯಾವಾಗಲಾದರೂ ಯೋಚನೆ ಮಾಡುತ್ತೇವೆಯೆ? ನಮ್ಮ ಭಾವನೆ, ಗಿಡಕ್ಕೆ ಏನೂ ಆಗುವುದಿಲ್ಲ ಎಂದು, ಅಲ್ಲವೆ? ಆದರೆ ನಿಜವಾಗಿ ಗಿಡದ ನಾಡಿಯ ಚಲನೆ ಅಲ್ಲಿ ನಿಂತುಹೋಗುತ್ತದೆ. ಸ್ವಲ್ಪ ಕಾಲದ ಮೇಲೆ ನಿಧಾನವಾಗಿ ಬಡಿಯಲಾರಂಭಿಸಿ ಅನಂತರ ಅಲ್ಲಿ ಪೂರ್ತಿ ನಿಂತುಹೋಗುವುದು. ಆ ಜಾಗ ಗಿಡದ ಪಾಲಿಗೆ ಸತ್ತಂತೆಯೇ ಸರಿ. ಗಿಡಗಳಿಗೂ ನಮ್ಮ ಹಾಗೆಯೇ ನೋವು ಉಂಟು. ಇದನ್ನು ಜಗತ್ತಿಗೆ ತಿಳಿಸಿಕೊಟ್ಟವರು ಭಾರತದ ವಿಜ್ಞಾನಿ ಜಗದೀಶಚಂದ್ರ ಬೋಸ್ ಅವರು. ಅವರು ವಿಜ್ಞಾನದ ಇನ್ನೂ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೂ ಅವರ ಹೆಸರು ಬಹಳ ಪ್ರಸಿದ್ಧವಾಗಿ ಇರುವುದು ಸಸ್ಯ ಸಂಬಂಧ ವಿಷಯವಾದ ಅವರ ಸಂಶೋಧನೆಗಳಿಗೆ.