Kacha / ಕಚ - Mera Library
0

Please enter AND, OR, NOT to narrow your search results
 
To
 
 
 
 
Kacha / ಕಚ

Kacha / ಕಚ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ತನ್ನವರ ಒಳಿತಿಗಾಗಿ ಶತ್ರುಗಳ ಮಧ್ಯೆ ಹೋಗಿವಾಸಿಸಿದ. ಶತ್ರುಗಳು ತುಂಡು ಮಾಡಿ ಹಾಕಿದರು,ಗುರುಗಳ ದಯದಿಂದ ಉಳಿದ. ಶತ್ರುಗಳ ಮಧ್ಯೆಯೇ ಇದ್ದರೆ ಎಂತಹ ವಿಪತ್ತು ಎಂದು ಸ್ಪಷ್ಟವಾಯಿತು. ಆದರೂ ಹಿಂದಿರುಗುವ ಯೋಚನೆ ಇಲ್ಲ.ಅಸಮಾನ ಶಕ್ತಿ ಪಡೆದ ಮಹಾಪುರುಷನ ಮಗಳು, ಸುಂದರಿ ತನ್ನನ್ನು ಪ್ರೀತಿಸಿದರೂ ಅವಳ ಯೋಚನೆ ಇಲ್ಲ. ಮೂರು ಬಾರಿ ಸಾವು ಬಂದರೂ, ತನ್ನವರ ಕಲ್ಯಾಣ ಕ್ಕಾಗಿ ತಾನು ಹಿಡಿದ ಕೆಲಸವನ್ನು ಸಾಧಿಸಿಯೇ ಸಾಧಿಸಿದ ವೀರ. ಈ ವೀರ ಕಚನ ಕಥೆ ತುಂಬ ಸ್ವಾರಸ್ಯವಾಗಿದೆ. ಸಂಜೀವಿನಿ ಮಂತ್ರ ಕಲಿಯಲೆಂದೇ ಬಂದಿದ್ದ ಕಚ. ಆ ಇಷ್ಟಾರ್ಥ ಕೈಗೂಡಿತು. ಆದರೂ ಕಚನ ಗುರುಸೇವೆ ಉತ್ಸಾಹದಿಂದ ಮುಂದುವರಿಯಿತು. ಮನೆಯ ಕೆಲಸಕಾರ್ಯಗಳಲ್ಲಿಯೂ ಅದೇ ಬಗೆಯ ಶ್ರದ್ಧೆ. ಗೋಸೇವೆಯಲ್ಲಿ ಅಂತಹದೇ ತಲ್ಲೀನತೆ. ಗುರುಪುತ್ರಿ ದೇವಯಾನಿಯಲ್ಲಿಯೂ ಅದೇ ಬಗೆಯಾದ ವಾತ್ಸಲ್ಯ ಗೌರವಗಳು. ಹೀಗೆ ಹಲವು ವರ್ಷ ಕಳೆದ ಮೇಲೆ ಅವನ ಶಿಷ್ಯವೃತ್ತಿ ಪೂರೈಸಿತು. ವಿದ್ಯೆ ಸಂಪೂರ್ಣವಾಯಿತು. ದೇವಲೋಕವನ್ನು ಬಿಡುವಾಗ ಕಚನು, ದೇವತೆಗಳಿಗೆ, ‘’ನನ್ನ ಒಡಲು, ಮನಸ್ಸು, ಪ್ರಾಣಗಳು ದೇವಲೋಕಕ್ಕೆ ಮೀಸಲು’’ ಎಂದಿದ್ದ. ಅದರಂತೆ ನಡೆದುಕೊಂಡಿದ್ದ. ಸಂಜೀವಿನಿ ಮಂತ್ರವನ್ನು ಕಲಿತಿದ್ದ. ಕಚನು ದೇವಲೋಕವನ್ನು ಸೇರಿ ಸಂಜೀವಿನಿ ಮಂತ್ರವನ್ನು ಇತರರಿಗೆ ಉಪದೇಶಿಸಿ ಅದರ ಫಲ ದೇವ ಸಮಾಜಕ್ಕೆ ದೊರಕುವಂತೆ ಮಾಡಿ ಕೀರ್ತಿಶಾಲಿಯಾದನು.