Lakshmana / ಲಕ್ಷ್ಮಣ - Mera Library
0

Please enter AND, OR, NOT to narrow your search results
 
To
 
 
 
 
Lakshmana / ಲಕ್ಷ್ಮಣ

Lakshmana / ಲಕ್ಷ್ಮಣ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಶ್ರೀರಾಮ ಸನಾತನ ಧರ್ಮ ದೇವರ ಅವತಾರವೆಂದು ಪೂಜಿಸಿಕೊಂಡು ಬಂದಿರುವ ಮಹಾಪುರುಷ. ಅವನಿಗೆ ನಮಸ್ಕಾರ ಸಲ್ಲಿಸುವಲ್ಲಿ ನಮ್ಮ ಸಂಪ್ರದಾಯ “ಶ್ರೀಸೀತಾ ಲಕ್ಷ್ಮಣ ಭರತ ಶತ್ರುಘ್ನ ಹನುಮತ್ಸಮೇತ ಶ್ರೀರಾಮಚಂದ್ರಸ್ವಾಮಿನೇ’’ ಎಂದು ಹೇಳುತ್ತದೆ. ಎಂದರೆ ನಾವು ಶ್ರೀರಾಮನಿಗೆ ನಮಸ್ಕಾರ ಮಾಡುವ ವೇಳೆ ಅವನ ಜೊತೆಗೆ ಅವನ ರಾಣಿ ಸೀತಾದೇವಿ, ಅವನ ಸೋದರರು ಲಕ್ಷ್ಮಣ ಭರತ ಶತ್ರುಘ್ನ, ಅವನ ಸೇವಕ ಹನುಮಂತ, ಇವರಿಗೂ ನಮಸ್ಕಾರ ಸಲ್ಲಿಸುತ್ತೇವೆ. ಹೀಗೆ ಪೂಜೆಗೆ ಅರ್ಹರಾದ ಇವರಲ್ಲಿ ರಾಣಿ ಸೀತಾದೇವಿಯದು ಮೊದಲ ಸ್ಥಾನ; ಸೋದರ ಲಕ್ಷ್ಮಣನು ಎರಡನೆಯದು. ಈ ಸಣ್ಣ ಪುಸ್ತಕದಲ್ಲಿ ನಮ್ಮ ಎಳೆಯರಿಗಾಗಿ ಈ ಮಹನೀಯ ಸೋದರನನ್ನು ಕುರಿತ ಮುಖ್ಯ ಸಂಗತಿಗಳನ್ನು ಸಂಗ್ರಹಿಸಿ ಹೇಳುವ ಯತ್ನ ಮಾಡಿದೆ. ರಾಮಚಂದ್ರ ದಶರಥ ಚಕ್ರವರ್ತಿಯ ಹಿರಿಯ ಮಗ. ಲಕ್ಷ್ಮಣ ಎರಡನೆಯ ಮಗ ಇರಬೇಕು. ರಾಮನ ತಾಯಿ ದಶರಥನ ಹಿರಿಯ ರಾಣಿ ಕೌಸಲ್ಯಾದೇವಿ. ಲಕ್ಷ್ಮಣ ಶತ್ರುಘ್ನರು ಎರಡನೆಯ ರಾಣಿ ಸುಮಿತ್ರಾ ದೇವಿಯ ಮಕ್ಕಳು. ಭರತ ಮೂರನೇ ರಾಣಿ ಕೈಕಯೀದೇವಿಯ ಮಗ. ಎಳೆತನದಿಂದ ಜೊತೆಯಾಗಿ ಬೆಳೆದು ರಾಮನಿಗೆ ಲಕ್ಷ್ಮಣ ಹೊರಗಡೆ ನಿಂತ ಇನ್ನೊಂದು ಪ್ರಾಣ ಎಂಬಂತೆ ಆದನು. ಮಗು ರಾಮಚಂದ್ರ ನಿದ್ರೆಮಾಡಬೇಕೆಂದರೆ ಜೊತೆಗೆ ಲಕ್ಷ್ಮಣ ಮಲಗಿರಬೇಕು. ಹಾಗೆಯೇ ಎಂಥ ರುಚಿಯಾದ ಉಣಿಸು ಎದುರಿಗಿ ದ್ದರೂ ಲಕ್ಷ್ಮಣ ಜೊತೆಗೆ ಬರುವರೆಗೆ ರಾಮ ಅದನ್ನು ಮುಟ್ಟುತ್ತಿರಲಿಲ್ಲ. ಬೆಳೆದ ಮೇಲೆ ರಾಮ ಎಲ್ಲಿಗೆ ಹೋದರೆ ಅಲ್ಲಿ ಲಕ್ಷ್ಮಣ ಅವನ ಅನುಚರನಾಗಿ ನಡೆಯುವನು. ಕೊನೆಗೂ ಇವರಿಬ್ಬರೂ ಹೀಗೆಯೇ ಬಾಳಿದರು. ಹೀಗೆ ಲಕ್ಷ್ಮಣ ಲೋಕದಲ್ಲಿ ಒಳ್ಳೆಯ ತಮ್ಮನಾಗಿರುವವರಿಗೆ ಮೇಲ್ಪಂಕ್ತಿ ಆದನು.