Lal Bahadur Shastri / ಲಾಲ್ ಬಹದ್ದೂರ್ ಶಾಸ್ತ್ರಿ - Mera Library
0

Please enter AND, OR, NOT to narrow your search results
 
To
 
 
 
 
Lal Bahadur Shastri / ಲಾಲ್ ಬಹದ್ದೂರ್ ಶಾಸ್ತ್ರಿ

Lal Bahadur Shastri / ಲಾಲ್ ಬಹದ್ದೂರ್ ಶಾಸ್ತ್ರಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಸ್ವತಂತ್ರ ಭಾರತದ ಮೊದಲನೆಯ ಪ್ರಧಾನಿ ಜವಹರಲಾಲ್ ನೆರಹರೂರವರ ಮನೆಯಾಗಿದ್ದ ತೀನ್ ಮೂರ್ತಿ ಭವನದಿಂದ ಬಂತು ಕೆಟ್ಟ ಸುದ್ದಿ: ನೆಹರೂಗೆ ಹೃದಯಾಘಾತ. ಮೇ 27ನೆಯ ತಾರೀಖಿಗೆ ಕೆಲವು ತಿಂಗಳ ಹಿಂದೆ ನೆಹರೂಗೆ ಲಘುವಾದ ಹೃದಯಾಘಾತವಾಗಿತ್ತು. ಆದರೂ ಅವರು ಬಹುಬೇಗ ಚೇತರಿಸಿಕೊಂಡಿದ್ದರು. ತಾವು ಇನ್ನೂ ಬಹುಕಾಲ ಬದುಕುತ್ತೇನೆಂಬುದೇ ಅವರ ಭಾವನೆ. ಆದರೆ ಆ ದಿವಸ ನೆಹರೂ ಮರೆಯಾದರು. ಲಾಲ್ ಬಹಾದುರರೇ ತಮ್ಮನ್ನು ತಾವು ಎಂದೂ ಹೊಗಳಿಕೊಂಡವರಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ಅಂಥ ಪ್ರತಿಭಾವಂತನೇನೂ ಅಲ್ಲ ಎಂದು ಹೇಳಿ ಕೊಳ್ಳುತ್ತಿದ್ದರು. ಅವರು ಎಂದೂ ಅಧಿಕಾರವನ್ನು ಬಯಸಿದವರಲ್ಲ. ಅದಕ್ಕಾಗಿ ಕೆಲಸ ಮಾಡಿದ್ದವರಲ್ಲ. ಆದರು ಅಧಿಕಾರ ಅವರನ್ನು ಅರಸಿ ಬಂತು. ಕೀರ್ತಿ ಅವರಿಗೆ ಕಿರೀಟ ತೊಡಿಸಿತು. ವಾಮನಮೂರ್ತಿ ವಿಕ್ರಮನಾಗಿ ಬೆಳೆದರು. ಹೂವಿನ ಹಾಗೆ ಮೃದುವಾಗಿರುವ ತಾವು ವಜ್ರದ ಹಾಗೆ ಕಠೋರವಾಗಿಯೂ ಇರಬಲ್ಲರೆಂಬುದನ್ನು ತಮ್ಮ ಕೆಲಸಗಳಿಂದ ತೋರಿಸಿ ಕೊಟ್ಟರು. ಭಾರತದ ಗೌರವವನ್ನು ನಾಲ್ಕು ದಿಕ್ಕುಗಳಿಗೂ ಹಬ್ಬಿಸಿದರು. ದಿಟ್ಟ ವ್ಯಕ್ತಿ, ಅಸದೃಶ ರಾಷ್ಟ್ರಪ್ರೇಮಿ, ಶಾಂತಿಯ ರೂವಾರಿ ಎಂದು ಇವರನ್ನು ಲೋಕವೇ ಕೊಂಡಾಡುತ್ತಿದ್ದಾಗ, ತಮ್ಮ ಬಾಳಿನ ಶಿಖರದ ಸಮಯದಲ್ಲಿ, ಹಠಾತ್ತನೆ ಕಣ್ಮುಚ್ಚಿದರು. ಅನಿರೀಕ್ಷಿತವಾಗಿ ಅಧಿಕಾರಕ್ಕೆ ಬಂದರು, ಅಷ್ಟೇ ಅನಿರೀಕ್ಷಿತವಾಗಿ ಈ ಲೋಕವನ್ನು ಬಿಟ್ಟು ತೆರಳಿದರು. ಲಾಲ್ ಬಹಾದುರ್ ಭಾರತದ ಚರಿತ್ರೆಯಲ್ಲಿ ಉಜ್ವಲವಾಗಿ ಬೆಳಗಿದ ಒಬ್ಬ ನಾಯಕರತ್ನ. ಅವರು ತೀರಿಕೊಂಡ ಮೇಲೆ ನಮ್ಮ ರಾಷ್ಟ್ರಪತಿಗಳು ರಾಷ್ಟ್ರದ ಜನರ ಪರವಾಗಿ ಅವರಿಗೆ ನೀಡಿದ ಭಾರತರತ್ನ ಎಂಬ ಬಿರುದು ಅವರಿಗೆ ತುಂಬ ಅನ್ವರ್ಥ.