Madakari Nayaka / ಮದಕರಿ ನಾಯಕ - Mera Library
0

Please enter AND, OR, NOT to narrow your search results
 
To
 
 
 
 
Madakari Nayaka / ಮದಕರಿ ನಾಯಕ

Madakari Nayaka / ಮದಕರಿ ನಾಯಕ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಮಲೆನಾಡ ಸೆರಗು ಮುಗಿದು ಬಯಲು ಸೀಮೆಯು ಆರಂಭವಾಗುವ ಪ್ರದೇಶದಲ್ಲಿ, ಕನ್ನಡ ನಾಡಿನ ಮಧ್ಯಭಾಗದಲ್ಲಿ ಜಾನಕಲ್ ಗ್ರಾಮವಿದೆ. ಅದರ ಗುಡ್ಡದ ನೆತ್ತಿಯ ಬಂಡೆಯ ಮೇಲೆ ಸುಂದರನಾದ ಬಾಲಕನೊಬ್ಬನು ನಿಂತಿದ್ದಾನೆ. ಅವನ ಮುಖಮಂಡಲ ದಲ್ಲಿ ಕ್ಷಾತ್ರ ತೇಜಸ್ಸು ಹೊರಹೊಮ್ಮುತ್ತಿದೆ. ತಲೆಯ ಮೇಲೆ ಆಕಾಶದಲ್ಲಿ ಆಷಾಢದ ಮೋಡಗಳು ಸುಳಿದು ಪೂರ್ವ ದಿಗಂತದಲ್ಲಿ ಮರೆಯಾಗುತ್ತಿವೆ. ಕೆಳಗೆ ಬೆಟ್ಟದ ಸುತ್ತ ಕೋಟೆ; ಕೋಟೆಯ ಪರಿಸರದಲ್ಲಿ ಊರು ಹಬ್ಬಿದೆ. ಊರಾಚೆ ತಲೆದೂಗುತ್ತಿರುವ ತೆಂಗು, ಅಡಿಕೆ ವೃಕ್ಷಗಳ ತೋಟಗಳು. ಅಲ್ಲಲ್ಲಿ ಹಲಸು, ಮಾವು ಮರಗಳ ಗುಂಪು. ನಾಲ್ಕು ದಿಕ್ಕುಗಳಲ್ಲೂ ಗುಡ್ಡಗಳು ತಲೆ ಎತ್ತಿ ನಿಂತಿವೆ. ಪ್ರಕೃತಿಯ ವೈಭವ−ಚೆಲುವುಗಳಲ್ಲಿ ಮೈಮರೆತು ನಿಂತಿದ್ದ ಹುಡುಗ. ಮದಕರಿ ರಾಜೇಂದ್ರನು ಆಳುತ್ತಿರುವ ಚಿನ್ಮೂಲಾದ್ರಿ ಗಿರಿಸಮೂಹಕ್ಕೆ ಏಳು ಶಿಖರಗಳು. ಲಾಲ್ ಬತೇರಿ, ರಣ ಬತೇರಿ, ತುಪ್ಪದ ಕೊಳದ ಬತೇರಿ, ಕಹಳೆ ಬತೇರಿ, ಹಿಡಿಂಬನ ಬತೇರಿ, ಝಾಂಡಾ ಬತೇರಿ ಮತ್ತು ಬಸವನ ಬತೇರಿಗಳಿಂದ ಶಿಖರಗಳು ಶೋಭಾಯಮಾನವಾಗಿವೆ. ಸೂರ್ಯವೀಥಿ, ಚಂದ್ರವೀಧಿ ಮುಂತಾದ ರಾಜಮಾರ್ಗಗಳು ಐಶ್ವರ್ಯವಂತರ ಭವನಗಳಿಂದ ಕೂಡಿವೆ. ಏಳು ಸುತ್ತಿನ ಕೋಟೆಯು ಈ ಗಿರಿಸಮೂಹವನ್ನು ಸುತ್ತು ವರಿದಿದೆ. ಆಳವಾದ ಅಗಳುಗಳು ಹೊರ ಕೋಟೆಗಳನ್ನು ಆವರಿಸಿವೆ. ಅಗಸೆ ಬಾಗಿಲುಗಳು. ಗುಪ್ತ ಮಾರ್ಗಗಳು, ದಿಡ್ಡಿಬಾಗಿಲುಗಳು ಲೆಕ್ಕವಿಲ್ಲದಷ್ಟಿವೆ. ತುಪ್ಪ, ಎಣ್ಣೆ, ದವಸಧಾನ್ಯಗಳನ್ನು ಸಂಗ್ರಹಿಸುವ ಕಣಜಗಳು ಹೇರಳವಾಗಿವೆ. ಮದ್ದುಗುಂಡು ತಯಾರಿಸುವ ಕಾಖರ್ಾನೆಗಳೂ ಶಸ್ತ್ರ ಸಂಗ್ರಹಣೆಗಾಗಿ ಆಲಯಗಳೂ ಸಾಲು ಸಾಲಾಗಿವೆ. ಕನ್ನಡನಾಡಿನ ಮಧ್ಯಭಾಗದಲ್ಲಿ ಚಿತ್ರದುರ್ಗದ ಕೋಟೆಯು ಒಂದು ವಜ್ರ ಕವಚ.