MegharadaSaha / ಮೇಘನಾದ ಸಹಾ - Mera Library
0

Please enter AND, OR, NOT to narrow your search results
 
To
 
 
 
 
MegharadaSaha / ಮೇಘನಾದ ಸಹಾ

MegharadaSaha / ಮೇಘನಾದ ಸಹಾ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಡಾ. ಮೇಘನಾದ ಸಹಾ. ಭಾರತದ ಪ್ರಗತಿಗಾಗಿ ವಿವಿಧ ರೀತಿಗಳಲ್ಲಿ ದುಡಿದುದಲ್ಲದೇ ನಮ್ಮ ನಾಡಿನ ವಿಖ್ಯಾತ ವಿಜ್ಞಾನಿಗಳಲ್ಲೊಬ್ಬರೆನಿಸಿದವರು ಡಾ. ಸಹಾ. ಡಾ. ಸಹಾ ಅವರ ಸೇವೆ ಅಸಮಾನವಾದುದು. ವಿದ್ಯಾಲಯಗಳನ್ನೂ ಸಂಶೋಧನಾಲಯಗಳನ್ನೂ ಸ್ಥಾಪಿಸುವುದು, ವಿಜ್ಞಾನಿಗಳಿಗೆ ಸ್ಫೂರ್ತಿಯನ್ನು ನೀಡುವುದು, ರಾಷ್ಟ್ರೀಯ ಯೋಜನೆಗಳಿಗೆ ಮಾರ್ಗದರ್ಶನ ನೀಡುವುದು- ಇವುಗಳಲ್ಲದೆ ಪ್ರವಾಹ ಮೊದಲಾದ ಸಮಯಗಳಲ್ಲಿ ಸಂತ್ರಸ್ತರಿಗೆ ನೆರವಾಗಲು ಸ್ವಯಂಸೇವಕರಾಗಿ ಸೇವೆ ಸಲ್ಲಿಸುವುದು ಅವರ ಮಾನವೀಯ ಗುಣಗಳಿಗೆ ನಿದರ್ಶನವಾಗಿದೆ. ತಾವು ಖ್ಯಾತಿಯ ಶಿಖರವೇರಿದಾಗಲೂ ಸಾಮಾನ್ಯರ ಸುಖದುಃಖಗಳ ಬಗೆಗೆ ಅವರು ಸದಾ ಸಹಾನುಭೂತಿ ಹೊಂದಿದ್ದರು.ಡಾ. ಸಹಾ ತಮ್ಮ ಸ್ವಪ್ರಯತ್ನದಿಂದ ಬಡತನದ ವ್ಯೂಹವನ್ನು ಭೇದಿಸಿ ಖ್ಯಾತಿಯ ಶಿಖರವನ್ನೇರಿದರು. ಅಷ್ಟೆ ಅಲ್ಲ, ಅವರ ಬಳಿಗೆ ಬಂದವರಿಗೆಲ್ಲರಿಗೂ ಅವರದು ಸ್ಫೂರ್ತಿದಾಯಕ ಸಂಸ್ಪರ್ಶ! ಹಿರಿತನದ ಪ್ರಗತಿಪರ ಮಾರ್ಗದರ್ಶನ! ಬಡತನದಲ್ಲಿ ಹುಟ್ಟಿ ಬೆಳೆದು, ಬಡವರಿಗಾಗಿ ದುಡಿದ, ವಿಜ್ಞಾನಕ್ಕಾಗಿ ತನುಮನ ಧನಗಳನ್ನು ವಿನಿಯೋಗಿಸಿದ ಈ ಸಿರಿವಂತಜೀವ ಭಾರತದ ಪ್ರಗತಿಗೆ ನೀಡಿದ ಕಾಣಿಕೆ ಎಷ್ಟು ಅದ್ಭುತ, ಅನುಕರಣೀಯ!