Parvathi / ಪಾರ್ವತಿ - Mera Library
0

Please enter AND, OR, NOT to narrow your search results
 
To
 
 
 
 
Parvathi / ಪಾರ್ವತಿ

Parvathi / ಪಾರ್ವತಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಪಾರ್ವತಿ ಪರಶಿವನ ಪತ್ನಿ. ವಿಶೇಷವಾದ ಅರ್ಥವುಳ್ಳ ಬೇರೆಬೇರೆ ಹಲವು ಹೆಸರುಗಳು ಆಕೆಗೆ ಸಲ್ಲುತ್ತವೆ. ಶಿವನಿಗೆ ‘ಭವ’ ಎಂದೂ ಹೆಸರಿದ್ದು, ಅವನ ಮಡದಿಯಾದುದರಿಂದ ‘ಭವಾನಿ’ ಎನಿಸಿದಳು. ಪರ್ವತರಾಜನ ಮಗಳಾದುದರಿಂದ ‘ಪಾರ್ವತಿ’. ಅದೇ ಅರ್ಥವುಳ್ಳ ಗಿರಿಜೆ, ಶೈಲಜೆ ಎಂದೂ ಅವಳ ಹೆಸರುಗಳು. ನಂಬಿಕೆಯಿಟ್ಟುಕೊಂಡು ಒಳ್ಳೆಯವರಾಗಿ ನಡೆಯುವವರಿಗೆ ಎಲ್ಲ ಬಗೆಯ ಮಂಗಳಗಳನ್ನು ಕರುಣಿಸುವವಳಾಗಿ ಸರ್ವಮಂಗಳೆ. ಬಾಲ್ಯದಲ್ಲೇ ಆಕೆ ಶಿವಭಕ್ತೆಯಾಗಿದ್ದಳು. ಶಿವನನ್ನು ಧ್ಯಾನಿಸಲು, ಜಪಮಾಡಲು ಕುಳಿತಳೆಂದರೆ, ಎಷ್ಟು ಹೊತ್ತಾದರೂ ಏಳುತ್ತಿದ್ದಿಲ್ಲ. ಇದರಿಂದ ಅವಳ ತಾಯಿ ಮೇನೆ ಬೇಸತ್ತು ‘ಎಲೈ ಪಾರ್ವತಿಯೇ ತಪಸ್ಸು ಬೇಡ’ ಎನ್ನುತ್ತಿದ್ದಳು. ಇದರಿಂದಲೇ ಮುಂದೆ ಅವಳಿಗೆ ‘ಉಮಾ’ ಎಂಬ ಹೆಸರೂ ಬಂತು. ಸಂಸ್ಕೃತದಲ್ಲಿ ‘ಉ’, ಎಂದರೆ ‘ಎಲೈ’ ಎಂತಲೂ ‘ಮಾ’ ಎಂದರೆ ‘ಬೇಡ’ ಎಂತಲೂ ಅರ್ಥ. ದೊಡ್ಡವಳಾದ ಮೇಲಂತೂ ಆಕೆ ತನಗೆ ಶಿವನೇ ಗಂಡನಾಗಬೇಕೆಂದು ಕಾಡಿನಲ್ಲಿ ಕಠಿಣವಾದ ತಪಸ್ಸನ್ನು ಮಾಡಿದಳು. ಅವಳ ಕೋಮಲ ಶರೀರದ ಶ್ರಮವನ್ನು ನೋಡಲಾರದೇ ಮೇನೆ ಆಗಾಗ ಅವಳ ಹತ್ತಿರಕ್ಕೆ ಬಂದು ಉಮಾ, ಉಮಾ (ಮಗಳೇ, ಬೇಡ!) ಎನ್ನುತ್ತಿದ್ದಳಂತೆ.