Seethadevi / ಸೀತಾದೇವಿ - Mera Library
0

Please enter AND, OR, NOT to narrow your search results
 
To
 
 
 
 
Seethadevi / ಸೀತಾದೇವಿ

Seethadevi / ಸೀತಾದೇವಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಸೀತೆ ಬಹು ಸುಂದರಿ. ಅವಳನ್ನು ಮದುವೆಯಾಗಲು ದೇಶವಿದೇಶಗಳಿಂದ ರಾಜರು ಬಂದರು. ಆದರೆ ಧನುಸ್ಸನ್ನು ನೋಡುತ್ತಲೇ ಗಾಬರಿಯಾಗಿ, ‘’ಅಬ್ಬಾ, ಇದು ಮನುಷ್ಯರಿಗೆ ಸಾಧ್ಯವಲ್ಲ’’ ಅನ್ನುತ್ತಾ ಅದಕ್ಕೆ ಕೈಮುಗಿದು ಹಿಂದಕ್ಕೆ ಹೋದರು. ವಿಶ್ವಾಮಿತ್ರ ಮಹರ್ಷಿಯು ತನ್ನ ಶಿಷ್ಯರಾದ ರಾಮ ಲಕ್ಷ್ಮಣರನ್ನು ಕರೆದುಕೊಂಡು ಮಿಥಿಲೆಗೆ ಬಂದರು. ಆ ಶಿಷ್ಯರು ರಾಜಪುತ್ರರು, ಅಯೋಧ್ಯಾ ದೇಶಾಧಿಪತಿ ಯಾದ ದಶರಥರಾಜನ ಮಕ್ಕಳು. ಅವರಿನ್ನೂ ತರುಣರು, ಆದರೆ ರಾಕ್ಷಸರನ್ನು ಗೆದ್ದಿದ್ದರು. ಮಹರ್ಷಿಯ ಮತ್ತು ರಾಮಲಕ್ಷ್ಮಣರ ಆಗಮನದಿಂದ ಜನಕರಾಜನಿಗೆ ಬಹಳ ಸಂತೋಷವಾಯಿತು. ಹಿರಿಯನಾದ ಶ್ರೀರಾಮನಿಗೆ ವಿಶ್ವಾಮಿತ್ರರು ಹೀಗೆ ಹೇಳಿದರು: ‘‘ರಾಮಚಂದ್ರಾ! ಮಹಾಶಿವನನ್ನು ಧ್ಯಾನ ಮಾಡು. ಆಮೇಲೆ ಧನುಸ್ಸನ್ನು ಕೈಗೆ ತೆಗೆದುಕೊ.’’ ಶ್ರೀರಾಮನು ಮೊದಲು ಮಹರ್ಷಿಗೆ ನಮಸ್ಕರಿಸಿದನು. ಧನುಸ್ಸಿನ ಬಳಿಗೆ ಬಂದು ಮೂರು ಸಲ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ ಶಿವಸ್ಮರಣೆ ಮಾಡಿ ಅದಕ್ಕೆ ಕೈ ಹಾಕಿದನು. ಅದನ್ನು ಲೀಲಾಜಾಲವಾಗಿ ಮೇಲೆತ್ತಿ ಬಾಣ ಹೂಡಿದನು; ಧನುಸ್ಸು ಮಹಾಧ್ವನಿಯನ್ನು ಮಾಡುತ್ತಾ ಮುರಿದು ಹೋಯಿತು. ಸೀತಾದೇವಿಯು ಬಂದು ಶ್ರೀರಾಮನ ಕೊರಳನ್ನು ಹಾರದಿಂದಲಂಕರಿಸಿ ದಳು. ದಶರಥನಿಗೆ ಶ್ರೀರಾಮನ ಸಾಹಸದ ಸುದ್ದಿ ಹೋಯಿತು. ರಾಜಪರಿವಾರದೊಂದಿಗೆ ಇಷ್ಟಮಿತ್ರರೊಂದಿಗೆ ದಶರಥ ರಾಜನು ಮಿಥಿಲೆಗೆ ಬಂದನು. ಅತ್ಯಂತ ವಿಜೃಂಭಣೆಯಿಂದ ಶ್ರೀರಾಮ–ಸೀತೆಯರ ವಿವಾಹ ನೆರವೇರಿತು.