Shankaracharyaru / ಶಂಕರಾಚಾರ್ಯರು - Mera Library
0

Please enter AND, OR, NOT to narrow your search results
 
To
 
 
 
 
Shankaracharyaru / ಶಂಕರಾಚಾರ್ಯರು

Shankaracharyaru / ಶಂಕರಾಚಾರ್ಯರು

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಭಾರತ ಸಂಸ್ಕೃತಿಯ ಇತಿಹಾಸ ನಿಜವಾಗಿ ಇಂತಹ ಮಹಾತ್ಮರ ಜೀವನದ ಹೊನಲು. ಸಮಾಜದಲ್ಲಿ ಆಗಾಗ ತಲೆ ಎತ್ತುವ ಕ್ಷೊಭೆಯಿಂದ- ಧಾರ್ಮಿಕ, ನೈತಿಕ, ತಾತ್ವಿಕ, ರಾಜಕೀಯ ಕ್ಷೊಬೆಗಳಿಂದ ಚೇತರಿಸಿಕೊಳ್ಳಲು ನಾಡು ಚೈತನ್ಯಪೂರ್ಣ ಮಹಿ ಮಾವಂತರನ್ನು ಕಾತರದಿಂದ ನಿರೀಕ್ಷಿಸುತ್ತದೆ. ಇದೇ ರೀತಿಯಲ್ಲಿ ಸರ್ವ ವಿಧದಲ್ಲಿಯೂ ಬೆಂದು ಉಪಶಾಂತಿಗಾಗಿ ತವಕಪಡುತ್ತಿದ್ದ ಭಾರತದ ಆತ್ಮ ನಿರೀಕ್ಷೆಯ ಫಲವಾಗಿ ಶ್ರೀ ಶಂಕರರ ಜನ್ಮ ಆಯಿತು ಎನ್ನಬಹುದು. ಅವರ ಕಾಲ ಕ್ರಿ. ಶ. 788ರಿಂದ 820ರವರೆಗೆ ಎಂದು ವಿಧ್ವಾಂಸರು ಅಭಿಪ್ರಾಯ ಪಡುತ್ತಾರೆ. ಕನಸಿನಲ್ಲಿ ಭಗವಂತ ಪ್ರಶ್ನಿಸಿದ: ‘’ನಿಮ್ಮ ನಿಷ್ಠೆ ಭಕ್ತಿಗಳಿಗೆ ಮೆಚ್ಚಿದ್ದೇನೆ. ನಿಮ್ಮಾಸೆಯನ್ನು ತೀರಿಸುತ್ತೇನೆ. ಆದರೆ ಒಂದು ಪ್ರಶ್ನೆ. ಲೋಕ ಗುರುವೆ ನಿಸುವ ಕೆಲವೇ ವರ್ಷ ಬದುಕುವ ಒಬ್ಬ ಪುತ್ರನು ಸಾಕೋ, ಅಥವಾ ಬಹು ವರ್ಷ ಬದುಕುವ ಆದರೆ ದಡ್ಡರಾದ ಅನೇಕ ಮಕ್ಕಳು ಬೇಕೋ?’’ ಸುಲಭದಲ್ಲಿ ಸಿಕ್ಕದ ದೇವರು ಸುಲಭದ ಪ್ರಶ್ನೆ ಹಾಕುತ್ತಾನೆಯೇ? ಭಗವಂತನಲ್ಲಿ ಅಪಾರವಾದ ವಿಶ್ವಾಸವುಳ್ಳ ದಂಪತಿಗಳು ಹುಡುಕಿದ ದಾರಿಯೇ ಬೇರೆ. ತೀರ್ಪನ್ನು ಆತನಿಗೆ ಬಿಟ್ಟರು ! ಪ್ರಸನ್ನನಾದ ಸ್ವಾಮಿಯೂ “ಶಿವಾಂಶಸಂಭೂತನಾದ ನಿಮ್ಮ ಕುಮಾರ ಲೋಕಗುರುವಾಗುತ್ತಾನೆ” ಎಂದು ಹೇಳಿ ಅಂತರ್ಧಾನನಾದ ಅನುಭವ. ಬಹು ಸಂತೋಷ ಪಟ್ಟು ಶಿವಗುರು ಅರ್ಯಾಂಬೆಯರು ಮತ್ತೆ ಹಲವು ದಿನಗಳು ಅಲ್ಲಿಯೇ ಇದ್ದು ಈಶ್ವರನ ಸೇವೆ ಮಾಡಿ ತಮ್ಮ ಊರಿಗೆ ಹಿಂತಿರುಗಿದರು. ಈ ಮಧ್ಯೆ ಶಂಕರರಿಗೆ ತಮ್ಮ ವೃದ್ಧ ತಾಯಿ ಆರ್ಯಾಂಬೆಯ ಅವಸಾನ ಸಮೀಪಿಸಿತೆಂದು ತಿಳಿದು ಬಂದಿತು. ತಾನು ಎಲ್ಲಿದ್ದರೂ ತಾಯಿಯ ಹತ್ತಿರಕ್ಕೆ ಬರುತ್ತೇನೆಂದು ಮಾತು ಕೊಟ್ಟಿದ್ದರು. ಆ ಮೇರೆಗೆ ಕಾಲಟಿಗೆ ಹಿಂತಿರುಗಿದರು. ಮಗ ಬಂದನೆಂದು ತಾಯಿಗೆ ತುಂಬಾ ಸಂತೋಷ. ಆದರೆ ತಾಯಿಯ ಮರಣ ಹತ್ತಿರವಾಗುತ್ತಿದೆ ಎಂದು ಶಂಕರರಿಗೆ ತಿಳಿಯಿತು. ಆತ್ಮವನ್ನು ಉದ್ಧರಿಸುವ ‘ಶಿವಭುಜಂಗ ಸ್ತೋತ್ರ’ವನ್ನೂ ‘ವಿಷ್ಣು ಸ್ತೋತ್ರ’ವ ನ್ನೂ ತಾಯಿಗೆ ನೀಡಿ ಆಕೆಗೆ ಸನ್ಮರಣವನ್ನೂ ಸದ್ಗತಿಯನ್ನೂ ಕೋರಿದರು.