Shishunala Sharipharu / ಶಿಶುನಾಳ ಶರೀಫರು - Mera Library
0

Please enter AND, OR, NOT to narrow your search results
 
To
 
 
 
 
Shishunala Sharipharu / ಶಿಶುನಾಳ ಶರೀಫರು

Shishunala Sharipharu / ಶಿಶುನಾಳ ಶರೀಫರು

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಶಿಶುನಾಳ ಶರೀಫರು. ಅವರು ಬಾಳಿದ್ದೂ ಹಾಗೆಯೇ. ಸಂಸಾರದಲ್ಲಿ ಇದ್ದೂ ಅವರು 'ಸಾಧು' ಆಗಿದ್ದರು. ಬಾಳಿನಲ್ಲಿ ಬಗೆಬಗೆಯ ಕಷ್ಟ ಎದುರಿಸಿಯೂ ಅವರು ಆನಂದದಿಂದ ಇದ್ದರು. ಅವರ ಆನಂದವು ಹೊರಗಿನ ವಸ್ತುಗಳನ್ನು ಅವಲಂಬಿಸಿರಲಿಲ್ಲ. ಸಹಜವಾಗಿ ತನ್ನೊಳಗೆ ಅನುಭವಿಸಿದ ಆನಂದವದು. ಶರೀಫರು ಸಂಸಾರದ ಬೇಕು-ಬೇಡಗಳನ್ನು ಸಾಕುಮಾಡಿ ಲೋಕದೊಳಗೆ ಏಕವಾಗಿ ಬಾಳಿದ ಸಾಧು. ಶಿಶುನಾಳೇಶನ ಬೆಳಕಿನೊಳಗೆ ಬೆಳಗಿದ ವರಕವಿ. ಹಳ್ಳಿಯ ಜನರ ಬಾಳಿನೊಂದಿಗೆ ಒಂದಾಗಿ ಅಲ್ಲಿ ಕಂಡ ಸನ್ನಿವೇಶಗಳನ್ನು, ಉಂಡ ಅನುಭವವನ್ನು ಆಡುನುಡಿಯಲ್ಲಿ ಮೂಡಿಸಿದ ಜನತೆಯ ಕವಿ. ಸಂಸಾರದ ಎಲ್ಲ ಘಟನೆಗಳಲ್ಲಿ ಪರಮಾತ್ಮನ ಲೀಲೆಯನ್ನು ಕಂಡು ಅವುಗಳಿಗೆ ಹೊಂದಿಕೆಯಾಗು ವಂತಹ ತತ್ತ್ವಗಳನ್ನು ಬೋಧಿಸಿದ ಬೋಧಕ. ಹಳ್ಳಿಯ ಜನರ ಹಬ್ಬ ಹುಣ್ಣಿಮೆಗಳಲ್ಲಿ ಆಟ-ನೋಟಗಳಲ್ಲಿ ಒಂದಾಗಿ ಬೆರೆತು ಹಳ್ಳಿಗರ ನಲಿವನ್ನು ಹೆಚ್ಚಿಸಿದ ರಸಿಕ. ತನ್ನ ಬದುಕು ಮತ್ತು ಹಾಡುಗಳ ಮೂಲಕ ಹಿರಿಯ ಜ್ಞಾನಿಗಳ, ಅನುಭಾವಿಗಳ ಮೆಚ್ಚುಗೆಗೆ ಪಾತ್ರವಾದ ಘನತೆಯುಳ್ಳ ವ್ಯಕ್ತಿ. ಅವರ ಕಥೆ ಇಲ್ಲಿದೆ.