Vidyaranyaru / ವಿದ್ಯಾರಣ್ಯರು - Mera Library
0

Please enter AND, OR, NOT to narrow your search results
 
To
 
 
 
 
Vidyaranyaru / ವಿದ್ಯಾರಣ್ಯರು

Vidyaranyaru / ವಿದ್ಯಾರಣ್ಯರು

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ವಿದ್ಯಾರಣ್ಯರು ಜೀವನದುದ್ದಕ್ಕೂ ಹಂಬಲಿಸಿದ್ದು ಜನತೆಯ ಕಲ್ಯಾಣಕ್ಕಾಗಿ, ದ್ವೇಷಿಸಿದ್ದು ಅನ್ಯಾಯವನ್ನು, ದಬ್ಬಾಳಿಕೆಯನ್ನು, ಸಾರಿದ್ದು ನಿರ್ಭಯವನ್ನು ಪರಧರ್ಮಕ್ಕೆ ಗೌರವ ಕೊಡುವುದನ್ನು. ಜನತೆಯ ಸೇವೆ ಸಲ್ಲಿಸಬೇಕೆಂಬ ಉದಾತ್ತವಾದ ಆದರ್ಶವನ್ನಿಟ್ಟುಕೊಂಡವರು ಅದಕ್ಕೆ ಯೋಗ್ಯತೆಯನ್ನು ಪಡೆಯಬೇಕು. ಒಂದು ಘನವಾದ ಕಾರ್ಯ ಸಾಧನೆಯಾಗಬೇಕಾದರೆ ಬರಿಯ ತೋಳಿನ ಶಕ್ತಿಯಷ್ಟೇ ಸಾಲದು, ತೋಳ ಶಕ್ತಿಗೆ ನಿರ್ಮಲವಾದ ನಿಷ್ಠೆ ಸೇರಬೇಕು. ಅಂತಹ ಕೆಲಸದಲ್ಲಿ ತೊಡಗಿರುವವರಿಗೆ ಕಣ್ಣ ಮುಂದೆ ದೊಡ್ಡತನದ ಮೇಲ್ಪಂಕ್ತಿ, ರಕ್ಷೆ ಇರಬೇಕು. ವಿದ್ಯಾರಣ್ಯರು ದೀರ್ಘ ತಪಸ್ಸನ್ನು ಮಾಡಿದರು. ಭುವನೇಶ್ವರಿಯನ್ನು ತಮಗಾಗಿ ಸುಖ ಅಧಿಕಾರಗಳನ್ನು ಬೇಡಲಿಲ್ಲ. ಜ್ಞಾನ ವೈರಾಗ್ಯಗಳನ್ನು ಬೇಡಿದರು. ಸಂನ್ಯಾಸಿಯಾದರು. ಇತರರ ಸುಖ-ದುಃಖ ಕಷ್ಟ-ನೋವು ಗಳಿಂದ ದೂರವಾಗಿದ್ದು ಮುಕ್ತಿಮಾರ್ಗ ಕಂಡುಕೊಳ್ಳುವುದಕ್ಕಲ್ಲ, ತಾವು ಒಬ್ಬ ವ್ಯಕ್ತಿ ಎಂಬುದನ್ನು ಮರೆತು ಇತರರಿಗೆ ಮುಡಿಪಾಗಿ, ಆತ್ಮಗೌರವ ಕಳೆದುಕೊಂಡಿದ್ದ ಕನ್ನಡಿಗರನ್ನು ಎಚ್ಚರಿಸಿ ಹೊಸ ರಾಜ್ಯ ಕಟ್ಟುವುದಕ್ಕೆ. ವಿಜಯನಗರ ರಾಜ್ಯದ ಸ್ಥಾಪನೆಯಾಗುವ ಹೊತ್ತಿಗೆ ಅವರು ಶೃಂಗೇರಿಯ ಶಾರದಾ ಪೀಠವನ್ನು ಅಲಂಕರಿಸಿದ್ದರು. ಇಂದಿಗೂ ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿ ವಿದ್ಯಾರಣ್ಯರ ದಿವ್ಯಮಂಗಳ ಮೂರ್ತಿಯನ್ನು ನೋಡಬಹುದು.